ipad/iphonetopBanner

ಕಥೆಗಳು

ವಿಷ್ಣು ಪುರಾಣ - 13

ಲೇಖಕ: ಚಂದಮಾಮ | 3rd Oct, 2011



ವಾಲಿಯ ಮರಣಾನಂತರ ಸುಗ್ರೀವನು ನಿಷ್ಕಂಟಕನಾಗಿ ಕಿಷ್ಕಿಂಧೆಯ ರಾಜನಾದನು. ವಾಲಿಯ ಕುಮಾರನಾದ ಅಂಗದನು ಯುವರಾಜನಾದನು. ಆಮೇಲೆ ಸುಗ್ರೀವನು ರಾಜಕಾರ್ಯಗಳನ್ನೆಲಾ್ಲ ಯುವರಾಜನಿಗೇ ಒಪ್ಪಿಸಿ, ತಾನು ಸುಖಭೋಗಗಳಲ್ಲಿ ತೇಲುತಾ್ತ, ರಾಮನ ಸಂಗತಿಯನ್ನೇ ಮರೆತುಬಿಟ್ಟನು. ಕಡೆಗೇ ಲಕ್ಷ್ಮಣನು ಧನುಷ್ಟಂಕಾರ ಮಾಡುತಾ್ತ ಕಿಷ್ಕಿಂಧೆಯನ್ನು ಪ್ರವೇಶಿಸಿದಾಗ, ಸುಗ್ರೀವನಿಗೇ  ಕರ್ತವ್ಯ ಪ್ರಜ್ಞೆ ಬಂದಿತು.

ಕೂಡಲೇ ಸುಗ್ರೀವನು ಸೀತೆಯನ್ನು ಹುಡುಕಲು ನಾಲ್ಕು ದಿಕ್ಕುಗಳಿಗೂ ವಾನರರನ್ನು ಕಳುಹಿಸಿದನು, ಅಂಗದ, ಹನುಮಂತ, ಜಾಂಬವಂತ ಮೊದಲಾದವರೆಲಾ್ಲ ದಕ್ಷಿಣ ದಿಕ್ಕಿಗೇ ಹೊರಟರು. ಆಗ ರಾಮನು ತನ್ನ ಬೆರಳಲ್ಲಿದ್ದ ಉಂಗುರವನ್ನು ಹನುಮಂತನ ಕೈಗೇ ಕೊಟ್ಟು, ಅದನ್ನು ಸೀತೆಗೇ ತನ್ನ ಗುರುತಾಗಿ ಕೊಡುವಂತೆ ಹೇಳಿದನು. ಆ ವಾನರರೆಲಾ್ಲ ‘‘ರಾವಣನು ಸೀತಾ ಅಮ್ಮನವರನ್ನು ಎತ್ತಿಕೊಂಡು ದಕ್ಷಿಣ ದಿಕ್ಕಿಗೇ ಹೋದನೆಂದು ಜಾಟಾಯು ಪಕ್ಷಿ ರಾಜನು ಹೇಳಿದನೇ ಹೊರತು, ಎಲ್ಲಿಗೇ ಹೋದ, ಎಲ್ಲಿ ಅಡಗಿಸಿಟ್ಟ ಎಂಬುದೊಂದೂ ತಿಳಿಯಲಿಲ್ಲ. ಅದನಾ್ಯರು ಹೇಳುವರೋ?’’ ಎಂದು ಮಾತಾಡಿಕೊಳ್ಳುತ್ತಿದ್ದರು. ಅವರನ್ನು ಕಬಳಿಸಬೇಕೇಂದು ಜಟಾಯುವಿನ ಅಣ್ಣನಾದ ಸಂಪಾತಿಯು ತೆವಳಿಕೊಂಡು ಬರುತ್ತಿದ್ದವನು, ತಮ್ಮನ ಹೆಸರು ಬಂದುದನ್ನು ಕೇೀಳಿ ಬೆರಗಾದನು.
ಒಂದು ಕಾಲದಲ್ಲಿ ಸಂಪಾತಿಯೂ ಜಟಾಯುವೂ ಸೂರ್ಯಮಂಡಲಕೇ್ಕ ಹಾರುವ ಪಂಥವನ್ನು ಕಟ್ಟಿ ಕೊಂಡು ಆಕಾಶದಲ್ಲಿ ಹಾರತೊಡಗಿದರು. ಆಗ ಜಟಾಯುವು ಹಾರಲಾಗದೆ, ಹಿಂದಿರುಗಿಬಿಟ್ಟನು. ಸಂಪಾತಿಯು ಮಾತ್ರ ಮತ್ತಷ್ಟು ಮೇಲಕೇ್ಕ ಹಾರಿದುದರಿಂದ ರೆಕೇ್ಕಗಳೆರಡೂ ಸುಟ್ಟು ದಕ್ಷಿಣ ಸಮುದ್ರ ತೀರದಲ್ಲಿ ಬಿದ್ದು ಬಿಟ್ಟಿದ್ದನು.

ಆ ಸಂಪಾತಿಯು ವಾನರರಿಂದ ನಡೆದ ಸಮಾಚಾರವನ್ನೆಲಾ್ಲ ತಿಳಿದು, ಅಂಗದನನ್ನು ತನ ಭುಜದ ಮೇಲೆ ಕೂರಿಸಿ ಕೊಂಡು ನೆಟ್ಟಗೇ ನಿಂತು, ದೂರದಲ್ಲಿ ಸಮುದ್ರದಾಚೆಗೇ ಕಾಣುವ ಲಂಕೇಯನ್ನು ಅವನಿಗೇ ತೋರಿಸಿದನು.


ಸಂಬಂಧಿತ ಕಥೆಗಳು

Customer Help Nos
BannerBanner