ipad/iphonetopBanner

ಕಥೆಗಳು

ಯಕ್ಷಪರ್ವತ 7

ಲೇಖಕ: ಚಂದಮಾಮ | 27th Aug, 2010


 

(ಸಮರಬಾಹುವನ್ನೂ, ಅವನ ಅನುಚರನನ್ನೂ ಕರಡಿಜನರ ಗುಂಪಿನವರು ತಮ್ಮ ಬಿಲದ ಕೋಟೆ ಯೊಳಕ್ಕೆ ಕರೆದುಕೊಂಡು ಹೋದರು. ಖಡ್ಗಜೀವದತ್ತರು, ಒಂದು ಕಡೆ ಹೊಗೆ ಏಳುತ್ತಿದ್ದ ಪ್ರದೇಶವನ್ನು ಸೇರಿ, ಅದು ಬಿಲದ ಕೋಟೆಯೆಂದು ಗುರುತಿಸಿ ಒಳಗೆ ಹೋದರು. ಅಲ್ಲಿ ಅವರನ್ನು ಗುರು ಭಲ್ಲೂಕನ ಮನುಷ್ಯರು ತಡೆದು, ಹಿಡಿದು ಕೊಂಡು, ಒಂದು ಸುರಂಗ ಮಾರ್ಗವಾಗಿ ತೋಳಗಳ ಬಂಡೆಯ ಬಳಿಗೆ ಕರೆದುಕೊಂಡು ಹೊರಟರು. ನಂತರ)

ಕತ್ತಲು ಮಯವಾಗಿದ್ದ ಸುರಂಗಮಾರ್ಗದಲ್ಲಿ, ಕರಡಿಜನರು ಸ್ವಲ್ಪ ದೂರ ಖಡ್ಗಜೀವದತ್ತರನ್ನು ನಡೆಸಿಕೊಂಡು ಹೋಗಿ, ಒಂದು ಕಡೆ ನಿಂತು ಕೊಂಡರು. ಮುಂದಿದ್ದ ಕರಡಿ ಜನರಲ್ಲೊಬ್ಬನು ತನ್ನ ಜೊತೆಗಾರನೊಡನೆ, ‘‘ಅಣ್ಣಾ! ಈ ಬಂದಿಗಳಿಬ್ಬರೂ ತೋಳಗಳ ಬಂಡೆ ಎಂದರೆ ಯಾವುದೋ ಒಂದು ವಿನೋದ ಸ್ಥಳ ಎಂದು ಕೊಂಡಂತಿದೆ. ಇದಕ್ಕೆ ಮುಂಚೆ ನಾವು ಹಿಡಿದು ತಂದ ವರೆಲ್ಲರೂ ಸಹಾ ತೋಳಗಳ ಅರಚುವಿಕೆ ಯನ್ನು ಕೇಳಿಯೇ ಭಯದಿಂದ ನಡನಡುಗಿ ಹೋಗುತ್ತಿದ್ದ ರು. ಇವರಿಗೆ ತೋಳಗಳ ಬಂಡೆ ಎಂದರೆ ಏನೆಂದು ಸ್ವಲ್ಪ ತೋರಿಸೋಣವೇ?’’ ಎಂದನು.


‘‘ಸರಿ ಹಾಗೆಯೇ ಆಗಲಿ’’ ಎಂದನು ಎರಡನೆಯವನು ಸ್ವಲ್ಪ ಬೇಸರದಿಂದ. ಆ ಕೂಡಲೇ ಮೊದಲನೆಯವನು ಕೈ ಎತ್ತಿ ಗುಹೆಯ ಮೇಲ್ಭಾಗದಲ್ಲಿರುವ ಕೊಕ್ಕೆಯಂತಹು ದೊಂದನ್ನು ಹಿಡಿದುಕೊಂಡು ಬಲವಾಗಿ ಎಳೆದನು. ಆ ಮರುಕ್ಷಣವೇ ಅಲ್ಲಿ ಅಳವಡಿಸಿದ್ದ ಚಿಕ್ಕ ಬಾಗಿಲೊಂದು ತೆರೆದುಕೊಂಡು, ಸುರಂಗದೊಳಕ್ಕೆ ತಿಂಗಳ ಬೆಳಕು ಪ್ರವಾಹದಂತೆ ನುಗ್ಗಿ ಬಂದಿತು. ಆ ಬೆಳಕಿನಲ್ಲಿ ಜೀವದತ್ತನು ಸುರಂಗ ಮಾರ್ಗವನ್ನು ಪರೀಕ್ಷಿಸಿ ನೋಡಿ, ‘‘ಖಡ್ಗಾ, ಇದು ನಾವಂದುಕೊಂಡಂತೆ ಯಾವು ದೋ ಚಿಕ್ಕ ಬಿಲವಾಗಿಲ್ಲ. ಇಲ್ಲಿ ಇವರು ಹೊರ ಪ್ರಪಂಚಕ್ಕೆ ತಿಳಿಯ ದಂತೆಯೇ ಜೀವಿಸಿರ ಬಹುದು.’’ ಎಂದನು.
ಆ ಮಾತುಗಳಿಗೆ ಕರಡಿ ಮನುಷ್ಯನೊಬ್ಬನು ದೊಡ್ಡದಾಗಿ ನಕ್ಕು ‘‘ಆಹಾ ಚನ್ನಾಗಿಯೇ ತಿಳಿದಿರುವೆ. ನೀವು ತೋಳಗಳ ಬಂಡೆಯ ಬಳಿಯಿಂದ ಪ್ರಾಣಸಹಿತ ಒಂದು ವಾರದೊಳಗೆ ತಿರುಗಿ ಈ ಸುರಂಗ ಮಾರ್ಗವನ್ನು ತಲುಪಿದಿ ರೆಂದರೆ ನಿಮ್ಮ ಜೀವನ ಪೂರ್ತಿ ಗುರುಭಲ್ಲೂಕರ ಸೇವೆಯಲ್ಲಿ ನೆಮ್ಮದಿಯಿಂದ ಕಳೆದು ಹೋಗುತ್ತದೆ.’’ ಎಂದನು.


ಸಂಬಂಧಿತ ಕಥೆಗಳು

BannerBanner