ipad/iphonetopBanner

ಕಥೆಗಳು

ಯಕ್ಷಪರ್ವತ - 6

ಲೇಖಕ: ಚಂದಮಾಮ | 30th Nov, 2009


 

(ಪರ್ವತ ಪ್ರಾಂತ್ಯವನ್ನು ಸೇರಿದ ಖಡ್ಗಜೀವದತ್ತರಿಗೆ, ದರೋಡೆಕಾರರ ಜೊತೆಗಿರುವ ಸ್ವರ್ಣಾಚಾರಿಯು ಕಂಡುಬಂದನು. ಅವನೊಡನೆ ಸೇರಿ ಅವರು ಬೆಟ್ಟದ ಮೇಲಕ್ಕೆ ಹೋದರು. ಆ ಸಮಯದಲ್ಲಿ ಒಬ್ಬ ದರೋಡೆಕಾರನು, ಅವರ ಬಳಿಗೆ ಓಡುತ್ತಾ ಬಂದು, ಬೇಟೆಗೆ ಹೋದ ತಮ್ಮ ನಾಯಕ ಸಮರಬಾಹುವನ್ನು ನರಮಾಂಸ ಭಕ್ಷಕರು ಹಿಡಿದು ಕೊಂಡಿರುವುದಾಗಿ ಹೇಳಿ, ಅವನನ್ನು ಕಾಪಾಡುವಂತೆ ಬೇಡಿಕೊಂಡನು. - ನಂತರ)

ದರೋಡೆಕಾರನು ಹೇಳಿದ ಮಾತುಗಳನ್ನು ಕೇಳಿದೊಡನೆಯೇ ಖಡ್ಗಜೀವದತ್ತರಿಗೆ ಎಲ್ಲೂ ಇಲ್ಲದ ಆಶ್ಚರ್ಯವೆನಿಸಿತು. ಇಷ್ಟು ದಿನಗಳಿಂದ ಲೂ ಅವರು ಕಾಡಿನಲ್ಲಿ ಎಷ್ಟೋ ದೂರ ತಿರುಗಾಡಿದ್ದರು ಆದರೆ, ಎಲ್ಲಿಯೂ ಅವರಿಗೆ ನರಮಾಂಸ ಭಕ್ಷಕರು ಕಂಡು ಬಂದಿರಲಿಲ್ಲ. ಜೀವದತ್ತನು ದರೋಡೆಕಾರನೊಡನೆ, ‘‘ನಿಮ್ಮ ನಾಯಕನನ್ನು ಅವರು ಸುಟ್ಟು ತಿನ್ನುತ್ತಾರೋ ಇಲ್ಲಾ ಹಸಿಯಾಗಿಯೇ ತಿನ್ನುತ್ತಾರೋ, ಅದೆಲ್ಲವನ್ನೂ ಆ ಮೇಲೆ ನೋಡೋಣ, ನೀನು ಮೊದಲು ಕಾಲತಾಮಸಮಾಡದೆ ನಡೆದುದೇನೆಂದು ಹೇಳು’’ ಎಂದನು.


‘‘ಸ್ವಾಮೀ, ನಾವು ಕಾಡಿನೊಳಗಡೆ ಬೇಟೆಗೆಂದು ಹೋಗಿ, ಒಂದು ಜಿಂಕೆಯನ್ನು ಕೊಂದು ಹೆಗಲ ಮೇಲೆ ಹೊತ್ತು ಕೊಂಡು ಮನೆಗೆ ಬರುತ್ತಿದ್ದೆವು. ದಾರಿಯಲ್ಲಿ ಒಂದು ಕಡೆ ಹುಲಿಯ ಗರ್ಜನೆಯೂ, ಒಬ್ಬ ಮನುಷ್ಯನು ಭಯದಿಂದ ಕೂಗಿಕೊಳ್ಳುವ ಧ್ವನಿಯೂ ಕೇಳಿ ಬಂದಿತು. ನಾವು ಮೂವರೂ ಅತ್ತ ಕಡೆಗೆ ಹೋದೆವು. ಒಂದು ಕಡೆ ಕಾಡುಜನಾಂಗದವನೊಬ್ಬನು ಹುಲಿಯ ಕಾಲಿನ ಕೆಳಗೆ ಸತ್ತು ಬಿದ್ದಿದ್ದನು. ಹುಲಿಯ ಎದೆಯಲ್ಲಿ ಅವನು ಚುಚ್ಚಿದ ಈಟಿಯಿದ್ದಿತು. ಹತ್ತಿರದಲ್ಲೇ ಒಂದು ಹುಲಿ ಮರಿಯು ಗೋಳಾಡುತ್ತಾ ತಿರುಗುತ್ತಿದ್ದಿತು.’’ ಎಂದನು ದರೋಡೆಕಾರನು.


‘‘ಅದು ಸತ್ತ ಆ ಹುಲಿಯ ಮರಿಯಾಗಿರ ಬೇಕು. ಸರಿ, ನಂತರ ಏನು ನಡೆಯಿತು?’’ ಎಂದನು ಜೀವದತ್ತನು. ‘‘ನಮ್ಮ ನಾಯಕನು ಆ ಹುಲಿಯ ಮರಿಯನ್ನು ತಂದು ಸಾಕೋಣ ಎಂದನು. ನಾನೂ ಅಡಗಿ ಕೊಂಡೇ ಹೋಗಿ ಅದನ್ನು ಹಿಡಿದು ಕೊಂಡೆನು. ಅಷ್ಟರಲ್ಲಿ ಹತ್ತು ಹನ್ನೆರಡು ಜನರು ಕರಡಿಯ ಚರ್ಮ ಧರಿಸಿಕೊಂಡು, ಮರಗಳ ಮರೆಯಿಂದ ಹಠಾತ್ತನೆ ಬಂದು ಮೇಲೆ ಬಿದ್ದು ನಮ್ಮನ್ನು ಹಿಡಿದು ಕೊಂಡರು.


ಸಂಬಂಧಿತ ಕಥೆಗಳು

Customer Help Nos
BannerBanner